ಒಗಟುಗಳು ಜನಪದ ಸಾಹಿತ್ಯದಲ್ಲಿ ಒಂದು ಮುಖ್ಯವಾದ ಪ್ರಕಾರ (ರಿಡ್ಡಲ್ಸ್).
ಕನ್ನಡದಲ್ಲಿ ಒಡಪು, ಮುಂಡಿಗೆ ಎಂಬ ಬೇರೆ ಹೆಸರುಗಳೂ ಉಂಟು. ಒಗಟುಗಳು ಎಂದರೆ ಒಬ್ಬರು ಮತೊಬ್ಬರಿಗೆ
ಒಡ್ಡುವ ಸವಾಲು, ಸಮಸ್ಯೆಗಳು.
ಒಗಟುಗಳು ಬಹಳ ಬುದ್ದಿವಂತಿಕೆಯಿಂದ ಬಗೆಹರಿಸಬೇಕಾದ ಸವಾಲಾಗಿರುತ್ತದೆ.
ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ
ಹೇಳುವುದು ಇದರ ಕ್ರಮ. ಇದು ಬುದ್ಧಿಶಕ್ತಿಯ ಪರೀಕ್ಷೆಗೊಂದು ಒಳ್ಳೆಯ ಒರೆಗಲ್ಲು.
ನಮ್ಮ ಭಾರತ ದೇಶದಲ್ಲಿ ಹಳ್ಳಿಗಳ ಜನರಿಂದ ಹುಟ್ಟಿಕೊಂಡಿರುವ ಈ ಒಗಟುಗಳನ್ನು ಜನಪದ ಒಗಟುಗಳು ಎಂದು ಕರೆಯಲಾಗುತ್ತದೆ.
ಹಳ್ಳಿ ಜನರ ರೂಢಿ ಮಾತುಗಳಲ್ಲಿ ಒಂದಾದ ಈ ಒಗಟುಗಳು ಬಹಳ ಜನಪ್ರಿಯವಾದವು. ನಮಗೆ ತಿಳಿದಿರುವ ಹಾಗು ಕೆಲವು ಪುಸ್ತಕಗಳಿಂದ
ಆಯ್ದ ಒಗಟುಗಳನ್ನು ಪಟ್ಟಿ ಮಾಡಿದ್ದೇವೆ.
kannada Ogatugalu - ಕನ್ನಡ ಒಗಟುಗಳು
- ಅಗಲವಾದ ಮಾಳಿಗೆಗೆ ಒಂದೇ ಕಂಬ - ಛತ್ರಿ
- ಐದು ಮನೆಗೆ ಒಂದೇ ಅಂಗಳ - ಅಂಗೈ
- ಹಗ್ಗ ಹಾಸಿದೆ, ಹಸು ಮಲಗಿದೆ - ಕುಂಬಳಕಾಯಿ
- ತಲೆ ಮೇಲೆ ಗುದ್ದುದ್ರೆ ಮನೆ ತುಂಬಾ ಮಕ್ಕಳು - ಬೆಳ್ಳುಳ್ಳಿ
- ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ - ಕಿವಿ
- ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ - ರೊಟ್ಟಿ
- ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಒಂದೇ ಬಣ್ಣ - ಎಲೆ ಅಡಿಕೆ
- ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ - ಬಾಳೆಲೆ
- ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ - ಕೋಟು ಅಂಗಿ
- ತಿಂಡಿಗೆ ಕಡಿಮೆ ಇಲ್ಲ, ತೀರ್ಥ ಕುಡಿದರೆ ಸಾವು - ವಿಷ
- 4 ಕಾಲುಂಟು ಪ್ರಾಣಿಯಲ್ಲ 2 ಕೈ ವುಂಟು ಮನುಷ್ಯನಲ್ಲ ಬಟ್ಟೇನೂ ಹೊರ್ತಿನಿ ಮನುಷ್ಯನ್ನು ಹೊರ್ತಿನಿ ನಾನ್ಯಾರು -
ಕುರ್ಚಿ
- ಕಿರೀಟ ಇದೆ ರಾಜ ಅಲ್ಲ, ಕಾಲ ತಿಳಿಸುತ್ತ್ತೆ ಗಡಿಯಾರವಲ್ಲ - ಕೋಳಿ
- ಗುಂಡಾಕಾರ ಮೈಯೆಲ್ಲಾ ತೂತು - ದೋಸೆ
- ಅಂಗಡಿ ಅಂಗಡಿ ನೂರೆಂಟು ಅಂಗಡಿ ಮುಚ್ಚಿದರೆ ಒಂದೇ ಅಂಗಡಿ - ಪುಸ್ತಕ
- ಅಂಗೈಲಿ ಆಡತ್ತೆ ದೇವರುತಂಕ ಹೋಗತ್ತೆ ಮುಟ್ಟಕೆ ಹೋದ್ರೆ ಕಚ್ಚತೆ - ಮಂಗಳಾರತಿ
- ಬೆಳ್ಳಿ ಕೊಡೆ ನೆಲಕ್ಕೆ ಹೊಡಿ - ಸಿಂಬಳ
- ಹಣ್ಣು ಹಣ್ಣು ಮುದುಕಿಗೆ ಮೈಯೆಲ್ಲಾ ಕಣ್ಣು - ಜರಡಿ
- ಮರದಲ್ಲಿ ಮರ ಹುಟ್ಟಿ ಮರ ಚಿತ್ರ ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ - ಮಗು
- ಅಪ್ಪ ಉದ್ದ ಅಮ್ಮ ಅಗಲ ಮಕ್ಕಳ್ಳೆಲ್ಲ ಗುಂಡುಗೆ - ತೆಂಗಿನ ಮರ
- ತೇಲತ್ತೆ ಮುಳಗತ್ತೆ ಕರಗತ್ತೆ - ಎಲೆ ಅಡಿಕೆ ಸುಣ್ಣ
- ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ, ದೇವಾಲಯವಲ್ಲ - ಗಡಿಯಾರ
- ಅಟ್ಟದಮೇಲೆ ಪುಟ್ಟಲಕ್ಷ್ಮಿ - ಕುಂಕುಮ
- ಬಿಳಿ ಮನೆ ಆ ಮನೆಗೆ ಬಾಗಿಲೇ ಇಲ್ಲ - ಮೊಟ್ಟೆ
- ಹಸಿರು ಗಿಡದಲ್ಲಿ ಮೊಸರು ಚೆಲ್ಲಿದೆ - ಮಲ್ಲಿಗೆ ಹೂ
- ಊರೆಲ್ಲ ಸುತ್ತತ್ತೆ ಮನೆಗೆ ಬಂದು ಮೂಲೆ ಸೇರುತ್ತೆ - ಚಪ್ಪಲಿ
- ಮನೆ ಎಲ್ಲ ಓಡಾಡತ್ತೆ ಮೂಲೆಗೆ ಬಂದು ಕೂರತ್ತೆ - ಪೊರಕೆ
- ಅಕ್ಕ ಅತ್ತರೆ ತಂಗಿನೂ ಅಳ್ತಾಳೆ - ಕಣ್ಣು
- ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ - ಮೋಡ, ನಕ್ಷತ್ರ
- ನೀಲಿ ಸಾಗರದಲ್ಲಿ ಬೆಳ್ಳನೇ ಮೀನುಗಳು ನಾನ್ಯಾರು - ತಾರೆಗಳು
- ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ - ಕಣ್ಣು
- ಎರಡು ಗವಿಗಳಿಗೆ ಒಂದೇ ಗೋಡೆ - ಮೂಗು
- ಅಟ್ಟಣ ಬಟ್ಟಣ ಅರಣ್ಯದಲ್ಲಿ ಶೆಟ್ಟಿ ಅಂಗಡಿ ಇಟ್ಟಿ ರುವನು - ಜೇನುಗೂಡು
- ಬಂಗಾರದ ಗುಬ್ಬಿ ಬಾಲದಿಂದ ನೀರು ಕುಡಿಯತ್ತೆ - ದೀಪ
- ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು - ಚಿಮಣಿ
- ಕರಿ ಹೊಲದ ಮದ್ಯದಲ್ಲಿ ಬಿಳಿ ದಾರಿ - ಬೈತಲೆ
- ತಾಯಿಗೆ ಒಂದು ತಂದೆಗೆ ಮೂರು - ಕುಂಕುಮ ವಿಭೂತಿಪಟ್ಟಿ
- ಸೂಜಿಗಿಂತ ಸಣ್ಣ ಕಾಗೆಗಿಂತ ಕಪ್ಪು - ಕೂದಲು
- ನಡು ಸಣ್ಣ, ನಾಗರ ಬಣ್ಣ ಹಿಡಿಯಲಿಕ್ಕೆ ಹೋದ್ರೆ ಕಡಿಲಿಕ್ಕೆ ಬರತ್ತೆ - ಕಂಜರಗಿ ಹುಳ
- ಅಲ್ಲಿ ಬುಳು ಬುಳು , ಇಲ್ಲಿ ಬುಳು ಬುಳು , ಕಲ್ಯಾಣದಲ್ಲಿ ಬುಳು ಬುಳು - ಬೀಸುವ ಕಲ್ಲು
- ಚೊಟುದ್ದ ಹುಡುಗಿ ಮಾರುದ್ದ ಜಡೆ - ಸೂಜಿ-ದಾರ
- ಹಾದಿಯಲ್ಲಿ ಹೋಗುವನನ್ನು ಕರೆಯುವುದು, ಮುಂದೆ ಕುಳಿತುಕೊಂಡು ಅಳುವುದು - ಬಳೆಗಾರ
- ಎರಡು ಮನೆ ಒಂದೇ ಕಂಬ - ಮೂಗು
- ನಾನು ಹುಟ್ಟುವುದು ಚಳಿಯಲ್ಲಿ, ಸಾಯಿವೆ ಬಿಸಿಲಲ್ಲಿ, ಕಲ್ಲಾಗಿ ಕೂರಲು ಬಲ್ಲೆ ನಾನು ಯಾರೂ ಹೇಳಬಲ್ಲಿರಾ - ಮಂಜಿನ
ಗಡ್ಡೆ
- ಆರು ಗೆರೆ ಇದ್ದರು ಹೀರೆಕಾಯಲ್ಲ, ಹುಳಿಯಿದ್ದರೂ ಹಣಸೇಕಾಯಲ್ಲ, ಹಸಿರಿದ್ದರು ಲಿಂಬೆಕಾಯಲ್ಲ - ನೆಲ್ಲಿಕಾಯಿ
- ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ - ತುರುಬು
- ಹಸಿರು ಕೋಲಿಗೆ ಮುತ್ತಿನ ತುರಾಯಿ - ಜೋಳದ ತೆನೆ
- ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ - ಹಲ್ಲುಪುಡಿ
- ಕರಿ ಗುಡ್ಡಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ - ಗಡಿಗೆ ಮಜ್ಜಿಗೆ
- ಹಗ್ಗ ಹಾಸಿದೆ, ಹಸು ಮಲಗಿದೆ - ಕುಂಬಳಕಾಯಿ
- ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು - ನೆನಪು
- ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು - ಛತ್ರ
- ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ - ಬಾಳೆಲೆ
- ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ - ಕೋಳಿ
- ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ - ಬೆಕ್ಕು
- ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ ! - ಉಪ್ಪು
- ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ - ದೀಪ
- ಊರಿಗೆಲ್ಲ ಒಂದೇ ಕಂಬ್ಳಿ - ಆಕಾಶ
- ಯಾರೂ ಹತ್ತಲಾರದ ಮರಕ್ಕೆ ಸರಗೂರು ಕರಿಯಪ್ಪ ಹತ್ತುತ್ತಾನೆ - ಇರುವೆ
- ಎಷ್ಟೇ ಮಳೆ ಬಂದರೂ ನೆನೆಯುವುದಿಲ್ಲ - ಎಮ್ಮೆ ಕೆಚ್ಚಲು
- ಮರದೊಳಗೆ ಮರ ಹುಟ್ಟಿ , ಭೂ ಚಕ್ರದ ಹಣ್ಣಾಗಿ , ತಿನ್ನಬಾರದ ಹಣ್ಣು ಬಲು ಚಂದ - ಎಳೆ ಕೂಸು
- ಮಳೆ ಹುಯ್ಲಿ , ಹುಯ್ದೆ ಇರ್ಲಿ ಬಾಯಲ್ಲಾ ಕೆಂಪು , ಮೈಯೆಲ್ಲಾ ಹಸಿರು - ಗಿಳಿ
- ನೀಲಿ ಕೆರೇಲಿ ಬಿಳಿ ಮೀನು - ಚಂದ್ರ
- ನೀರುಂಟ್ಟು ಬಾವಿಯಲ್ಲ , ಜುಟ್ಟುಂಟು ಪೂಜಾರಿಯಲ್ಲ , ಮೂರು ಕಣ್ಣುಂಟು ಶಿವನಲ್ಲ - ತೆಂಗಿನ ಕಾಯಿ
- ಒಳ್ಳೆ ಕೋಳಿ ಮುಳ್ಳಲಿ ಮೊಟ್ಟೆ ಇಕ್ಕದೆ - ನಿಂಬೆಹಣ್ಣು
- ಬಿಳಿ ಹುಡುಗನಿಗೆ ಕರಿಟೋಪಿ - ಬೆಂಕಿ ಕಡ್ಡಿ
- ಹೊಕ್ಕುವಾಗ ಒಂದು ಹೊರಟಾಗ ನೂರು - ಶ್ಯಾವಿಗೆ
- ನಿಂಗಕ್ಕ ನೀರಕ್ಕ , ಹಾಕುವವರುಂಟು ತೆಗೆಯುವವರಿಲ್ಲ , ಅದೇನಕ್ಕ ? - ಹಚ್ಚೆ
- ಅಕ್ಕನ ಮೇಲೆ ಛತ್ರಿ- ರೆಪ್ಪೆ
- ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು - ಏಲಕ್ಕಿ
- ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ - ಅಡಿಕೆ ಮರ
- ಅಮ್ಮನ ಆಕಾಶವಾಣಿ ನಾನು - ಮಗು
- ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ - ಹುಣಸೇಹಣ್ಣು
- ಸಾಯೋವರೆಗೂ ಹೂವಿಲ್ಲ , ಹಣ್ಣು ಮಾತ್ರ ಬಿಡ್ತದೆ - ಹತ್ತಿ ಹಣ್ಣು
- ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ - ನುಸಿ
- ಆರು ಕಾಲು ಅಂಕಣ್ಣ ಮೂರು ಕಾಲು ದೊಂಕಣ್ಣ ಸದಾ ಮೀಸೆ ತಿರುವಣ್ಣ - ನೊಣ
- ಮೂವತ್ತೆರಡು ಜನ ಅಗಿತ್ತಾರೆ , ಒಬ್ಬ ರುಚಿ ನೋಡ್ತಾನೆ -ಹಲ್ಲು , ನಾಲಿಗೆ
- ಊರುಂಟು ಜನರಿಲ್ಲ ನದಿಯುಂಟು ನೀರಿಲ್ಲ - ಭೂಪಟ.
- ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ - ಆಕಾಶ
- ಬಂಡೆಯ ಮೇಲೆ ಮಲಗುತ್ತೆ , ತಂತಿ ಮೇಲೆ ಕುಣಿಯತ್ತೆ - ಒಣಗಲು ಹಾಕಿದ ಬಟ್ಟೆ
- ಕಪ್ಪುಂಟು ಕಸ್ತೂರಿಯಲ್ಲ , ಬಿಳ್ಪುಂಟು ಸುಣ್ಣವಲ್ಲ , ನೀರುಂಟು ಬಾವಿಯಲ್ಲ , ರೆಕ್ಕೆಯುಂಟು ಪಕ್ಷಿಯಲ್ಲ - ಕಣ್ಣು
- ಅಂಕು ಡೊಂಕಿನ ಮರ, ಕಚ್ಚಿದವರ ಬಾಯಿಗೆ, ಉಚ್ಚಿ ಹುಯ್ಯುವ ಮರ - ಕಬ್ಬು
- ಎಂದರೆ ತೆರಿತಾವ, ಅಪ್ಪ ಎಂದರೆ ಮುಚ್ಚುತಾವ - ಬಾಯಿ
- ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು? - ಸಾಲಿಗ್ರಾಮ
- ಸುತ್ತಮುತ್ತ ಗರಿಕೆ, ನಡುವೆ ಕುಡಿಕೆ - ಕಣ್ಣು
- ಎರಡು ಮನೆಗೆ ಒಂದೇ ದೂಲ - ಮೂಗು
- ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ - ಗಿಳಿ
- ಒಂಟಿಕಾಲಿನ ಕುಂಟ. ನಾನ್ಯಾರು? - ಬುಗರಿ
- ಒಂದು ಬತ್ತಿ ಮನೆಯೆಲ್ಲ ಬೆಳಕು - ಸೂರ್ಯ
- ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು - ಕಲ್ಲಂಗಡಿ ಹಣ್ಣು
- ಕರಿ ಮಂಚದ ಮೇಲೆ, ಹಾಕುವ ಹಾಸಿಗೆ, ತೆಗೆಯುವ ಹಾಸಿಗೆ - ಕಾವಲಿ ದೋಸೆ
- ತೂತಿಲ್ಲದ ಒಡವೆ - ಕುಂಕುಮ
- ಒಂದು ಮನೆಯಲ್ಲಿ ಮೂರು ಜನ ಅಕ್ಕ-ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ ಒಬ್ಬರಿಗೆ ಕಾಣೋಲ್ಲ - ಜಾದಳಕಾಯಿ
- ಒಂದು ಮರ, ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ - ಆಕಾಶ ನಕ್ಷತ್ರ ಚಂದ್ರ
- ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ - ದಾರಿ
- ಅಟ್ಟದ ತುಂಬಾ ಹಗ್ಗ ಹಾಸೈತೆ, ಅದರ ಮೇಲೆ ಭೂತ ಕೂತವ್ನೆ - ಕುಂಬಳಕಾಯಿ
- ಒಂದು ಹಪ್ಪಳ ಊರಿಗೆಲ್ಲ ಊಟ - ಚಂದ್ರ
- ಚೆಲ್ಲೋದುಂಟು, ಕುಯ್ಯೋದುಂಟು, ತಿನ್ನೋದಿಲ್ಲ - ಕೂದಲು
- ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು ಗೊತ್ತಾಗುತ್ತದೆ - ಅನ್ನದ ಅಗುಳು
- ಅಕ್ಕಣ್ಣನಿಗೆ ಆರು ಕಣ್ಣು, ಮುಕ್ಕಣ್ಣಂಗೆ ಮೂರು ಕಣ್ಣು, ಲಿಂಗಪ್ಪನಿಗೆ ಒಂದೇ ಕಣ್ಣು - ಕೊಳಲು, ತೆಂಗಿನ ಕಾಯಿ,
ಸೂಜಿ
- ಒಂದು ಸುಣ್ಣದ ಗೋಡೆಗೆ, ಒಂದೂ ಬಾಗಿಲಿಲ್ಲ - ಕೋಳಿ ಮೊಟ್ಟೆ
- ಗೂಡಿನಲ್ಲಿನ ಪಕ್ಷಿ ನಾಡೆಲ್ಲ ನೋಡುತ್ತದೆ - ಕಣ್ಣು
- ಕಾಸಿನ ಕುದುರೆಗೆ ಬಾಲದ ಲಗಾಮು - ಸೂಜಿ ದಾರ
- ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ, ಬೆಲೆಯಿಲ್ಲ, ಮೈ ಹಸಿರಾಗಿದೆ - ಗಿಳಿ
- ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ, ಮುಚ್ಚಿದರೆ ಹಾನಿ ಇದೇನು - ಮೂಗು, ಬಾಯಿ
- ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು? - ಮೊಟ್ಟೆ
- ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು? - ಕೋಳಿ
- ಇದ್ದಲು ನುಂಗುತ್ತ, ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು? - ರೈಲು
- ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು
ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ - ಗಡಿಯಾರ
- ಹಸಿರು ಹಾವರಾಣಿ, ತುಂಬಿದ ತತ್ರಾಣಿ, ಹೇಳದಿದ್ದರೆ ನಿಮ್ಮ ದೇವರಾಣಿ - ಕಲ್ಲಂಗಡಿ ಹಣ್ಣು
- ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು ಬಾರೋ ಹಾಗಿಲ್ಲ - ತೆಂಗು
- ಕಡಿದರೆ ಕಚ್ಚೋಕೆ ಆಗೋಲ್ಲ, ಹಿಡದ್ರೆ ಮುಟ್ಟೋಕೆ ಸಿಗೋಲ್ಲ - ನೀರು
- ಒಂದು ರುಮಾಲು ನಮ್ಮಪ್ಪನೂ ಸುತ್ತಲಾರ - ದಾರಿ
- ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ ತಂತು - ಯುಗಾದಿ
- ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ ನೀರಿಗಿಳಿತವೆ - ಅಕ್ಕಿ
- ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು - ನವಿಲು
- ಸಾಗರ ಪುತ್ರ, ಸಾರಿನ ಮಿತ್ರ - ಉಪ್ಪು
- ಮೋಟು ಗೋಡೆ ಮೇಲೆ, ದೀಪ ಉರೀತಿದೆ - ಮೂಗುಬೊಟ್ಟು
- ಮರನು ಮರನೇರಿ ಮತ್ತೆ ಮರನೇರಿ ಬಸವನಾ ಕತ್ತೇರಿ ತಿರುಗುತ್ತಿದೆ - ಗಾಣ
- ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ - ನೆರಳು
- ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು ನೂರಾಗಿ - ಶ್ಯಾವಿಗೆ
- ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ ಕುಯ್ಯೋ, ಮರ್ರೋ ಅಂತವಳೇ - ತಂಬೂರಿ
- ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು ಸಿಕ್ಕಿತು -
ತೆಂಗಿನಕಾಯಿ
- ಹಾರಿದರೆ ಹನುಮಂತ, ಕೂತರೆ ಮುನಿ, ಕೂಗಿದರೆ ಕಾಡಿನ ಒಡೆಯ - ಕಪ್ಪೆ
- ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ - ನಾಲಿಗೆ
- ಕೈಲಿದ್ದಾಗ ಗುದಿಸಾಡುತ್ತೇನೆ, ಕೈ ಬಿಟ್ಟಾಗ ಗೊರಕೆ ಒಡೆಯುತ್ತೇನೆ - ಕಸಪೊರಕೆ
- ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ, ಸಂಚಾರವಿಲ್ಲದ ಮಾರ್ಗಗಳು ಎಲ್ಲಿ? - ನಕ್ಷೆ
- ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ - ಸಾಬೂನು
- ಊಟಕ್ಕೆ ಮೊದಲು ನಾನು ಅಂತ ಬರುತ್ತೆ - ಬಾಳೆ ಎಲೆ, ತಟ್ಟೆ
- ನಾನು ತುಳಿದೆ ಅದನ್ನ, ಅದು ತುಳಿಯೆತು ನನ್ನನ್ನ - ನೀರು
- ಬಡ ಬಡ ಬಂದ ಅಂಗಿ ಕಳಚಿದ, ಬಾವಿಯೊಳಗೆ ಬಿದ್ದ - ಬಾಳೆ ಹಣ್ಣು
- ಕೊಳದ ಒಳಗೆ ಒಂದು ಮರ ಹುಟ್ಟಿ, ಬೇರು ಇಲ್ಲ, ನೀರು ಇಲ್ಲ - ಎಣ್ಣೆ ದೀಪ
- ನೋಡಿದರೆ ನೋಟಗಳು, ನಕ್ಕರೆ ನಗುಗಳು, ಒಡೆದರೆ ತುಂಡುಗಳು - ಕನ್ನಡಿ
- ಕಲ್ಲರಳಿ ಹೂವಾಗಿ , ಎಲ್ಲರಿಗೂ ಬೇಕಾಗಿ , ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ - ಸುಣ್ಣ
/ ಸುಣ್ಣದ ಕಲ್ಲು
- ಅಕ್ಕ ಪಕ್ಕ ಚದುರಂಗ, ಅದರ ಹೂವು ಪದುರಂಗ ಅದರ ಹೆಸರು ಅಯ್ಯಯ್ಯಪ್ಪ. ಇದು ಏನು? - ದತ್ತುರಿಯ ಮುಳ್ಳು
- ವನದಲ್ಲಿ ಹುಟ್ಟಿ, ವನದಲ್ಲಿ ಬೆಳೆದು, ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು - ಕಮಲ
- ನಾಲ್ಕು ಕಂಬಗಳುಂಟು ದೇವಾಲಯವಲ್ಲ; ಎರಡು ಮೊರಗಳುಂಟು ಕೇರಲಾಗುವುದಿಲ್ಲ; ಒಂದು ಕಹಳೆಯುಂಟು ಊದಲಾಗುವುದಿಲ್ಲ;
ಹಾಗಾದರೆ ನಾನು ಯಾರು? - ಆನೆ
- ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? - ಭಾರತ
- ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ, ಅವನ್ಯಾರು? - ಹೆಗ್ಗಣ
- ರಾಮನಂತ ಸಮುದ್ರ ರತ್ನದಂತ ಮೀನು ನೀರು ಬತ್ತಿಹೋದ್ರೆ ಮೀನು ಸತ್ತು ಹೋಗುತ್ತೆ - ದೀಪ / ಹಣತೆ
- ಮೂರು ಕಡೆ ನೀರು ನೆತ್ತಿ ಮೇಲೆ ಬೆಟ್ಟ ಹಾಗಾದರೆ ನಾನು ಯಾರು? - ಭಾರತ
- ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ - ನುಸಿ
- ಹಿಡಿದರೆ ಹಿಡಿಯಷ್ಟು ಬಿಟ್ಟರೆ ಮನೆತುಂಬ - ದೀಪದ ಬೆಳಕು
- ಕಾಲಿಲ್ಲದೆ ನಡೆಯುವುದು ಬಾಯಿಲ್ಲದೆ ನುಡಿಯುವುದು ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು - ನದಿ
- ಚೋಟುದ್ದ ಹುಡುಗಿಗೆ ಮಾರುದ್ದ ಜಡೆ - ಸೂಜಿ ದಾರ
- ರಕ್ತವಿಲ್ಲದ ಮಾಂಸ , ಕರುಳಿಲ್ಲದ ಹೊಟ್ಟೆ - ಸೀಗಡಿ
- ಚಿಕ್ಕ ಬೋರನಿಗೆ ಬಾಲದಲ್ಲಿ ಕತ್ತಿ - ಹುರಳಿಕಾಯಿ
- ಬಿಳಿಯ ಹೊಲದಲ್ಲಿ ಕರಿ ಕಾಳು ಕೈಯಲ್ಲಿ ಬಿತ್ತುತ್ತಾರೆ ಬಾಯಲ್ಲಿ ಏತ್ತುತ್ತಾರೆ ನಾನು ಯಾರು - ಪುಸ್ತಕ ಮತ್ತು
ಅಕ್ಷರಗಳು
- ಹಳ್ಳಿ ಗಡಿಯಾರ, ಒಳ್ಳೆ ಆಹಾರ - ಕೋಳಿ
- ನೀರು ಇರುತ್ತೆ ನದಿ ಅಲ್ಲ, ಬಾಗಿಲು ಇರುತ್ತೆ ಮನೆ ಅಲ್ಲ - ಕಣ್ಣು
- ಬಲಗೈಯಲ್ಲಿ ಗೀತೆ ಎಡಗೈಯಲ್ಲಿ ರಾಟೆ ಹಿಡಿದಿದ್ದೆ ನಾನು ಯಾರು - ಗಾಂಧೀಜಿ
- ಬಾಯಲ್ಲಿ ಹಲ್ಲಿಲ್ಲ, ಮಯಲ್ಲಿ ಶಕ್ತಿ ಇಲ್ಲ, ತಲೆಯಲ್ಲಿ ಕೂದಲಿಲ್ಲ, ಆದ್ರೂ ಎಲ್ರುನ್ನು ಕಾಡತಿನಿ ನಾನ್ಯಾರು -
ಸೊಳ್ಳೆ
- ಅಕ್ಷರಗಳಿದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಾಗಿದ್ದರೂ ಚಕ್ರವಲ್ಲ, ನಾನ್ಯಾರು - ನಾಣ್ಯ
- ಗಂಟೆ ಹೊಡೆಯುತ್ತಾನೆ ಪೂಜಾರಿ ಅಲ್ಲ, PAPER ಅರಿಯುತ್ತಾನೆ ಆದರೆ ಹುಚ್ಚುನೂ ಅಲ್ಲ, ಹಣ ಕೇಳುತ್ತಾನೆ ಭಿಕ್ಷುಕ
ಅಲ್ಲ - ಕಂಡಕ್ಟರ್
- ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ?ನಾನ್ಯಾರು ಹೇಳಿ? - ನಕ್ಷತ್ರ
- ಹಗ್ಗ ಹಾಸಿದೆ ಕೋಣ ಮಲಗಿದೆ - ಕುಂಬಳಕಾಯಿ, ಬಳ್ಳಿ
- ನನ್ನ ಕಂಡರೆ ಎಲ್ಲರು ಓದೀತಾರೆ - ಚೆಂಡು
- ಬಿಳಿ ಕುದುರೆಗೆ ಹಸಿರು ಬಾಲ - ಮೂಲಂಗಿ
- ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ - ಕುಂಕುಮ
- ಬರೋದ ಕಂಡು ಕೈ ಒಡ್ತಾರೆ - ಬಸ್
- ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು - ಹುಂಜ
- ಹಸಿರು ಮುಖಕ್ಕೆ ವಿಪರೀತ ಕೋಪ, ಕೋಪ ಮಾಡಿಕೊಳ್ಳದೆ ನಾನ್ಯಾರೆಂದು ಹೇಳಿ? - ಮೆಣಸಿನಕಾಯಿ
- ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು ಪ್ರಜೆಗಳು - ಸೀತ ಫಲ
- ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ - ಕಣ್ಣು
- ಮನೆ ಮೇಲೆ ಮಲ್ಲಿಗೆ ಹೂವು - ಮಂಜು
- ಹಾರಿದರೆ ಹನುಮಂತ ಕೂಗಿದರೆ ಶಂಖ - ಕಪ್ಪೆ
- ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು - ಸುಣ್ಣ
- ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ - ಪೋಸ್ಟ್ ಕಾರ್ಡ್
- ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ ತೆರೆದರೆ ಮೂಗು ಮುಚ್ಚುತ್ತಿ - ಆಕಾಶ
- ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ, ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ ಇಡುತ್ತದೆ - ಜೋಳದ ದಂಟು
- ಎತ್ತ ಹೋದರು ಕುತ್ತಿಗೆಗೆ ಕೈ ಹಾಕುತ್ತಾರೆ! ನಾನ್ಯಾರು? - ಸಾಲಿಗ್ರಾಮ
- ಕರಿ ಹುಡುಗನಿಗೆ ಬಿಳಿ ಟೋಪಿ - ಹೆಂಡದ ಮಡಿಕೆ
- ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು, ಇದನ್ನು ನೋಡಲು ಜನ ಕಾದಿಹರು - ನಾಣ್ಯ
- ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ - ತಿಗಣೆ
- ಕುದುರೆ ಬಾಲದಿಂದ ನೀರು ಕುಡಿಯುತ್ತದೆ - ಹೇನು
- ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುನಿ - ಕಪ್ಪೆ
- ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು - ಸುಣ್ಣ
- ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ ಪಕ್ಷಿಗೆ ಮರಣ - ದೀಪ
- ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ, ನೀರು ಕಂಡ್ರೆ ನಿಲ್ಲುತ್ತೆ - ಚಪ್ಪಲಿ
- ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ ನುಡಿಯುವುದು, ಮೇಲು ಕೆಳಗಾಗಿ ಓದುವುದು - ನದಿ
- ಜಂಬು ನೇರಳೆ ಮರ, ಎಳೆದರೆ ನಾಲ್ಕು ಬಾವಿ ನೀರು ಒಂದೇ ಆಗುತ್ತದೆ - ಮೇಡು
- ಕಣ್ಣಿಗೆ ಹತ್ತಿರ ಕಾಲಿಗೆ ದೂರ - ಬೆಟ್ಟ
- ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ - ಮಾವು
- ಹತ್ತಾರು ಮಕ್ಕಳ ತಂದೆ, ಅದಕ್ಕೆ ತಲೆಯ ಮೇಲೆ ಜುಟ್ಟು. ಇದು ಏನು? - ಹುಂಜ
- ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ, ಬೆನ್ನು ತೋಳುಂಟು ಮನುಷ್ಯನಲ್ಲ! ನಾನ್ಯಾರು? - ಕುರ್ಚಿ
- ಹಾರುವುದು ಹಕ್ಕಿಯಲ್ಲ, ಕೊಂಬು ಉಂಟು ಗೂಳಿಯಲ್ಲ, ಬಾಲ ಉಂಟು ಕೋತಿಯಲ್ಲ. ಇದು ಏನು? - ಗಾಳಿಪಟ
- ಅಕ್ಷರಗಳಿದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಾಗಿದ್ದರೂ ಚಕ್ರವಲ್ಲ, ನಾನ್ಯಾರು? - ನಾಣ್ಯ
- ಅಪ್ಪ ಅಪ್ಪ ಮರ ನೋಡು, ಮರದೊಳಗೆ ಎಲೆ ನೋಡು, ಎಳೆಯೊಳಗೆ ತೂತು ನೋಡು, ತೂತೊಳಗೆ ಮಾತು ನೋಡು. ಇದು ಏನು? - ಪುಸ್ತಕ
- ಸತ್ತವನೇ ಸಾವಿನ ಸುದ್ದಿ ತಗೊಂಡು ಹೋಗ್ತಾನೆ.. - ಹಲಸಿನ ಹಣ್ಣು
- ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ. ಇದು ಏನು? - ಬದನೇಕಾಯಿ
- ಊರಿನಲ್ಲಿ ಕುರಿ ಕೂಗಿದರೆ ಮೈಯೆಲ್ಲಾ ತೂತು, ಇದು ಏನು? - ಒಂದರಿ